At Public Plus Kannada, we deliver accurate, timely, and unbiased news to keep our audience informed and empowered. Our news coverage spans a wide range of topics, including politics, current affairs, business, sports, entertainment, lifestyle, and more, ensuring that our viewers get a 360-degree view of the world around them.
ಕೆಜಿಎಫ್,ಮಾ.14-
ಕೆಜಿಎಫ್ ತಾಲೂಕು ರಾಬರ್ಟ್ ಸಂತೆಪೇಟೆನಲ್ಲಿರುವ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ 90ನೇ ವರ್ಷದ ಬ್ರಹ್ಮರಥೋತ್ಸವವೂ ಶುಕ್ರವಾರ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿಸಲಾಯಿತು.
ಬೆಳಿಗ್ಗೆ 6:55ಗೆ ಭಜನೆ ಮಂದಿರದಿಂದ ಆರಂಭವಾದ ರಥೋತ್ಸವ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.
ಕೆಜಿಎಫ್ ತಹಸಿಲ್ದಾರ್ ನಾಗವೇಣಿ ರಥೋತ್ಸವವನ್ನು ಪ್ರಾರಂಭಿಸಿ ಪೂಜೆ ಸಲ್ಲಿಸಿದ್ದರು. ಭಕ್ತಾದಿಗಳು ರಥಕ್ಕೆ ಹೂ, ದವನ, ಹಣ್ಣು ಎಸೆದು ಹರ್ಷೋದಾರಗಳ ನಡುವೆ ಸಂಭ್ರಮಿಸಿದ್ದರು.
ಕೆಜಿಎಫ್ ನಗರದ ಜನರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಭಾವದಿಂದ ನಮಿಸಿ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಅನುಗ್ರಹ ಕೋರಿದ್ದರು. ಈ ಸಂದರ್ಭದಲ್ಲಿ ರಾಬರ್ಟ್ಸಂಪೇಟೆ 3 ನೇ ಕ್ರಾಸ್ ನಲ್ಲಿರುವ ಶ್ರೀ ಶಕ್ತಿ ಮಾರಿಯಮ್ಮನ್ ದೇವಸ್ಥಾನದ ಪರವಾಗಿ 3000 ಜನಕ್ಕೆ ಅನ್ನದಾನ ಮಾಡಿದ್ದರು.
ಈ ಸಂದರ್ಭದಲ್ಲಿ ವಿವಿಧ ಸೇವೆ ಕಾರ್ಯಕ್ರಮಗಳು ಹಾಗೂ ಅನ್ನದಾನ, ಪಾನಕ, ಕೋಸಂಬರಿ, ಮಜ್ಜಿಗೆ ಅನ್ನದಾಸೋಹ ನಡೆಯಿತು.
ಬೆಂಗಳೂರು, ಮಾ 14: ಬಿಜೆಪಿ ಮುಖಂಡ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಡಿಸಿಎಂ ಡಿ ಕೆ ಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದ ಸಂದರ್ಭ.